ಅಭಿಪ್ರಾಯ / ಸಲಹೆಗಳು

ಟ್ರಸ್ಟ್ ಪತ್ರ

 ಇಂಡಿಯನ್ ಟ್ರಸ್ಟ್ ಆಕ್ಟ್, 1882.

ಪ್ರ. 1

ಟ್ರಸ್ಟ್ ನ್ನು ಹೇಗೆ ಪ್ರಾರಂಭಿಸುವುದು?

ಉ:

1. ಭಾರತೀಯ ಟ್ರಸ್ಟ್ ಕಾಯಿದೆ, 1882ರ ಕಲಂ 4ರ ಅನ್ವಯ ಟ್ರಸ್ಟ್ ನ್ನು ಒಂದು   

   ನ್ಯಾಯಬದ್ದ ಉದ್ದೇಶಕ್ಕೆ (Lawfull purpose)  ಸ್ಥಾಪನೆ ಮಾಡಬಹುದು.

2. ಇದಕ್ಕೆ ಒಂದು ಲಿಖಿತವಾದ ಒಡಂಬಡಿಕೆ ಪತ್ರ ಇರಬೇಕು. (Non testgamentory)

3. ಸ್ಥಾಪಕನು ಮರಣ ಶಾಸನದ ಮೂಲಕ ಟ್ರಸ್ಟ್ ನ್ನು ಪ್ರಾರಂಭಿಸಬಹುದು.

4. ಟ್ರಸ್ಟ್ ನ್ನು ಪ್ರಾರಂಭಿಸಲು ನಿಖರವಾದ ನಮೂನೆ ಅಗತ್ಯವಿಲ್ಲ. ಸ್ಥಾಪಕನ  

   ಉದ್ದೇಶವು ಸ್ಪಷ್ಟವಾಗಿರಬೇಕು.

5. ಟ್ರಸ್ಟ್ ನ್ನು ಸ್ಥಾಪಿಸಲು ಚರ ಅಥವಾ ಸ್ಥಿರ ಆಸ್ತಿಗಳನ್ನು ಒಳಪಡಿಸಬಹುದು.

ಪ್ರ. 2

ಯಾವ ಕಾರಣಗಳಿಗೆ ಟ್ರಸ್ಟ್ ನ್ನು ಸ್ಥಾಪಿಸಲು ಬರುವುದಿಲ್ಲ?

ಉ:

ಭಾರತೀಯ ಟ್ರಸ್ಟ್ ಕಾಯಿದೆ 1882ರ ಕಲಂ 4ರನ್ವಯ ಈ ಕೆಳಕಂಡ ಕಾರಣಗಳಿಗೆ ಟ್ರಸ್ಟ್ ನ್ನು ಸ್ಥಾಪಿಸಲು ಬರುವುದಿಲ್ಲ.

1. ಸ್ಥಾಪಕನ ಉದ್ದೇಶವು ಕಾನೂನು ಬಾಹಿರವಾಗಿದ್ದರೆ (Unlawful)

2. ಟ್ರಸ್ಟ್ ಕಾಯಿದೆ ನಿಯಮಗಳಿಗೆ ವಿರೋಧವಾಗಿದ್ದರೆ

3. ಮೋಸ, ವಂಚನೆ ಇತ್ಯಾದಿ ಇವುಗಳಿಗೆ ಅವಕಾಶವಿದ್ದಲ್ಲಿ

4. ಒಬ್ಬ ವ್ಯಕ್ತಿಯ ಆಸ್ತಿಗೆ ಹಾನಿಯನ್ನು ಉಂಟು ಮಾಡುವ ಹಾಗಿದ್ದರೆ,

ಪ್ರ. 3

ಟ್ರಸ್ಟ್ ನ್ನು ಯಾರು ಸ್ಥಾಪನೆ ಮಾಡಬಹುದು?

ಉ:

ಭಾರತೀಯ ಟ್ರಸ್ಟ್ ಕಾಯಿದೆ, 1882ರ ಕಲಂ 7 ರನ್ವಯ ಈ ಕೆಳಕಂಡವರು ಸ್ಥಾಪನೆ ಮಾಡಬಹುದು.

1. ಕ್ರಮಬದ್ದವಾದ ಒಡಂಬಡಿಕೆಗಳನ್ನು ಮಾಡಿಕೊಳ್ಳಲು ಅರ್ಹನಾಗಿದ್ದಲ್ಲಿ ಅಂತಹ  

   ವ್ಯಕ್ತಿಯು ಟ್ರಸ್ಟ್ ನ್ನು ಸ್ಥಾಪನೆ ಮಾಡಬಹುದು (Completent to contract)

2. ಮುಖ್ಯ ಸಿವಿಲ್ ನ್ಯಾಯಾಲಯದ ಅಪ್ಪಣೆ ಮೇರೆಗೆ ಮೈನರ್ ಗಳ ಪರವಾಗಿ ಸ್ಥಾಪನೆ      

   ಮಾಡಬಹುದು.

ಪ್ರ. 5

ಟ್ರಸ್ಟ್ ಯಾ ದತ್ತಿ ಪತ್ರಕ್ಕೆ ತಗಲುವ ನೋಂದಣಿ ಫೀ ಎಷ್ಟು?

ಉ:

ಕರ್ನಾಟಕ ನೋಂದಣಿ ನಿಯಮಾವಳಿ, 1965ರ ನೋಂದಣಿ ಫೀ ಕೋಷ್ಡಕ (ಅನುಚ್ಚೇದ) 1ರ ಅನ್ವಯ ಟ್ರಸ್ಟ್ ಡೀಡ್ ನಲ್ಲಿ ಸ್ಥಾಪಕನು ಸೂಚಿಸಿರುವ ಮೌಲ್ಯ ಅಥವಾ ಚರ, ಸ್ಥಿರ ಆಸ್ತಿಯ ಒಟ್ಟು ಮೌಲ್ಯಕ್ಕೆ ಶೇ. 1ರಷ್ಟು ನೋಂದಣಿ ಫೀ ಪಾವತಿಸಬೇಕು.

ಪ್ರ. 6

ಟ್ರಸ್ಟ್ ನ್ನು ರದ್ದು ಮಾಡಬಹುದೇ?

 

ಭಾರತೀಯ ಟ್ರಸ್ಟ್ ಕಾಯ್ದೆ 1882ರ ಕಲಂ 78ರ ಅನ್ವಯ ಟ್ರಸ್ಟ್ ನ್ನು ಕೆಳಕಂಡ ಕಾರಣಗಳಿಗೆ ರದ್ದು ಮಾಡಬಹುದು.

1. ಟ್ರಸ್ಟ್ ನ ಫಲಾನುಭವಿಗಳು ಅಪೇಕ್ಷೆಪಟ್ಟಾಗ ಟ್ರಸ್ಟ್ ನ್ನು ರದ್ದು ಮಾಡಬಹುದು

2. ಟ್ರಸ್ಟ್ ನಲ್ಲಿ ಅದನ್ನು ರದ್ದುಪಡಿಸುವ ಅವಕಾಶ ಮಾಡಿಕೊಂಡಿದ್ದರೆ, ಈ    

   ಅವಕಾಶದಂತೆ ಟ್ರಸ್ಟ್ ನ ಸ್ಥಾಪಕನು ಟ್ರಸ್ಟ್ ನ್ನು ರದ್ದುಪಡಿಸಬಹುದು.

3. ಟ್ರಸ್ಟ್ ನ ಸ್ಥಾಪಕನು ತಾನು ಮಾಡಿದ ಸಾಲದ ತೀರುವಳಿಗಾಗಿ ಟ್ರಸ್ಟ್ ನ್ನು   

   ಸ್ಥಾಪಿಸಿದ್ದು ಈ ವಿಷಯವನ್ನು ಸಾಲಗಾರರಿಗೆ ತಿಳಿಸದಿದ್ದಂತಹ ಸಂದರ್ಭದಲ್ಲಿ   

   ಸ್ಥಾಪಕನ್ನು ಟ್ರಸ್ಟ್ ನ್ನು ರದ್ದು ಮಾಡಬಹುದು.

ಪ್ರ. 7

ಟ್ರಸ್ಟ್ ಯಾ ದತ್ತಿ ಪತ್ರದ ನೂನ್ಯತೆಗಳನ್ನು ತಿದ್ದುಪಡಿ ಮಾಡಬಹುದೇ?

ಉ:

ಟ್ರಸ್ಟ್ ಯಾ ದತ್ತಿ ಪತ್ರದ ನೂನ್ಯತೆಗಳು ಇದ್ದರೆ ತಿದ್ದುಪಡಿ ಮಾಡಬಹುದು.

ಇತ್ತೀಚಿನ ನವೀಕರಣ​ : 25-02-2021 01:03 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ನೋಂದಣಿ ಮತ್ತು ಮುದ್ರಾಂಕ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080